About Me

My photo
Bangalore, Karnataka, India
goodhearty@gmail.com
Showing posts with label ಮನದ ಬಣ್ಣ. Show all posts
Showing posts with label ಮನದ ಬಣ್ಣ. Show all posts

Monday, November 28, 2011

ಮನದ ಬಣ್ಣ

ಎಂದೋ ಗೀಚಿದ ಹರಿದ ಹಾಳೆಯ ಹಿಡಿದು
ಮತ್ತೊಮ್ಮೆ ಬಣ್ಣವನು ಬಳಿಯುವೆನು ಇಂದು
ಬದಲದ     ಭಾವನೆಯು  ಚಿತ್ತಾರ ಆದಲ್ಲಿ
ಮೂಡುವುದು  ಕಾಡಿರುವ ಕಲ್ಪನೆಯ ಸಿಂಧು


ನೆನಪಿನಂಗಳದಲ್ಲಿ  ಹೀಗೆಯೇ ಕಾಡುತಿರೆ,
ಹಾಗೆಯೇ ಬಿಡಿಸುವೆನು  ನೆನವುಗಳನ್ನು
ಇರುವ  ಬಣ್ಣಗಳನ್ನೆಲ್ಲ  ಒಪ್ಪ್ಪಾಗಿ  ಹಚ್ಚುತಲಿ
ಪಡೆದುಬಿಡು ಜೀವವನು  ನಾಚಿಸುತ ನನ್ನು!


ಇರದ  ನಲ್ಮೆಯ ಮಾತು ,ಮನಸಿನಂಗಳ   ಆಗಿ
ತುಂಬಿಕೊಂಡಿದೆ ನಯನಬೆಳಕನ್ನೆಲ್ಲ  ಬಿರಿದು.
ಮಿಡಿಯದ   ಮೌನವನು, ಮರೆತಿರುವ  ಮಧುರವನು
ತಿರುವಿದೆನು ಬಣ್ಣದಲಿ  ಸೆಲೆಯಲ್ಲಿ ಬೆರೆತು.


ಎಲ್ಲ ಬಣ್ಣಗಳು ಹಾಗೆ  ಗರಿಗೆದರಿ ಬಾನಿನಲಿ  
ಹಾರುತಿದೆ ಹಕ್ಕಿಗಳ ಹಿಂಡು ಹಿಡಿದು!
ಹರಿದ ಹಾಳೆಯ ಮೇಲೆ ಬೆರೆತ ವರ್ಣವು ಈಗ
ಮೆರೆದು ಮಾಡಿತು  ಮೋಡಿ, ಆಗಸದಿ ನೋಡು!