ಎರಡೇ ಹೆಜ್ಜೆಗೆ ಹೆದ್ದಾರಿ ಮುಗಿಯುವುದೆ?
ಮುಗಿದಲ್ಲಿ ಮಗದೊಮ್ಮೆ ಬದಲಿಹುದು ನಿಯತಿ.
ಎರಡೇ ದಿನದಲ್ಲಿ ತಿಳಿಯನ್ನು ಅರಿಯುವುದೇ?
ಅರಿತರು ಅರಿಯದಿಹ ಪ್ರಕ್ರತಿಯ ನೀತಿ.
ಕನಸನ್ನೇ ಮನಸೆಲ್ಲ ನೇಯುತ್ತ ಹೋದರೆ
ಮಾಡದ ಮನಸೇನು ಮಾಡುವುದು ಹೇಳು?
ಇರುವ ಸೊಗಸನ್ನು ಸವಿಯುತ್ತ ಹೋದಲ್ಲಿ
ಸೊಗಸಿಗು ಮಿಗಿಲಾದ ಸಿಹಿ ಸಿಗುವುದೇನು?
ಸಾಧನೆಯು ಸಾಕೆಂದು ,ಸಾಗದೆಯೇ ನೀನಿಂದು
ಜೀವನವ ಸಾಗಿಸುತ , ಸೋಲುತಿರೆ ಅಂದು,
ಮುಂದೊಮ್ಮೆ ಹಿಂದೆಂದು ,ಕಾಡದ ಕನಸುಗಳು
ಕಾಡುವುದು ಕಹಿಯಾಗಿ ಜೀವನಕೆ ಇಂದು!
ಕನಸನ್ನು ಅಟ್ಟದಿರು, ಸಾಕೆಂದು ಸರಿಯದಿರು,
ಸಾಧನೆಯ ಶಿಖರವನು ಹತ್ತಿಬಿಡು ಬಂದು
ಮಾಡದ ಮನಸನ್ನು ಮತ್ತೊಮ್ಮೆ ಮಾಡಿಬಿಡು
ಕಲ್ಪನೆಗೂ ಮಿಗಿಲಾದ ಮುಗಿಲಿಹುದು ಮುಂದು.
"ಕಲ್ಪನೆಗೂ ಮಿಗಿಲಾದ ಮುಗಿಲಿಹುದು ಮುಂದು !!!"
--ವೀರಭದ್ರ ಎಸ್ ಹೆಗಡೆ
