ಭಾವರಹಿತದ ಬೇಗೆ ಮೂಡಿ ಮೆರೆಯುವುದು.
ಹಾಗೆ ಬರೆದರೆ ಹೇಗೆ?ತಿಳಿದು ತಿಳಿದವ ಹಾಗೆ
ಭಾವಗೀತೆಯ ಹಾಗೆ ಮೂಡಿ ಬರಬಹುದು.
ಏಕೇ ಬರೆಯಲಿ
ನಾನು?ಭಾವನೆಯ ಪೋಣಿಸುತ
ಕನಸ ನೊಗವನೇ ಗೀಚಿ ಕಥೆಯ ಮಾಡಲೇನು?
ಬರೆದು ಬಿಟ್ಟರೆ ಏನು ?ಮಿಡಿವ ಕಂಬನಿ ಏನು
ಮೊಗದ ತುದಿಯಲಿ ಕರಗಿ ಜಾರದಿರುವುದೇನು?
ಕನಸ ನೊಗವನೇ ಗೀಚಿ ಕಥೆಯ ಮಾಡಲೇನು?
ಬರೆದು ಬಿಟ್ಟರೆ ಏನು ?ಮಿಡಿವ ಕಂಬನಿ ಏನು
ಮೊಗದ ತುದಿಯಲಿ ಕರಗಿ ಜಾರದಿರುವುದೇನು?
ಹೇಗೆ ಬರೆದರೆ ಏನು? ಬರೆಯದಿರಲು ನಾನು
ಮುನಿಸೋ ಮನಸಿಗೆ ಏನು, ಮುದಿಸಿ ಮರಗುವುದೇನು?
ಬರಿದು ಬರೆದರೆ ಏನು?ಮರೆತು ಮೆರೆದರೆ ಏನು?
ನೆನೆದ ಸಾಲುಗಳೆಲ್ಲ ,ಮುದವ ನೀಡುವುದೇನು?
ಹೆಪ್ಪುಗಟ್ಟಿದ ಮೌನ , ನಗೆಯ ಸೋಗಿನಲಿ ತೂರಿ
ಮಿನುಗೋ ಕಂಗಳ ಹಿಂದೆ ಇರುಳ ನೆರಳನು ನೋಡಿ.
ಹೆಪ್ಪುಗಟ್ಟಿದೆ ರಕ್ತ ,ತಡೆಯ ಹಿಡಿದ ಭಾವ
ಸಿಗದ ಉತ್ತರಕಿ೦ದು ಹೃದಯ ಬಡಿದಿಹುದು
ನೀ ಹೀಗೆ ಬರೆದರೆ ಹೇಗೆ?
ReplyDeleteಭಾವ ಮೊಳೆಯುವ ಹಾಗೆ
ಪದಗಳಿಗೇನು ಯಾರಿಲ್ಲದಿದ್ದರೂ ಉಳಿದು ಬಿಡುತ್ತವೆ
ಆ ಪದಗಳ ಮಧ್ಯದಲೆ ನೀ ಕಳೆದು ಹೋಗುವ ಹಾಗೆ!
ಭಾವಗಳೇ ಹಾಗೆ , ಬರೆಯದಿದ್ದರೆ ಹೇಗೆ?
ReplyDelete