ಕಣ್ಣರಳಿಸುತ್ತ ಕಾಯುವಳು
ಸುತ್ತಲು ಪತಿವ್ರತದ ಬೇಲಿ ಹಾಕಿ
ಕನವರಿಸುತ್ತ ಮಲಗಿದಳು
ಕಾಮದ ನೆರಳನ್ನು ಆಚೆ ನೂಕಿ
ಅತ್ತಿತ್ತ-ಇತ್ತತ್ತ ಮುತ್ತಿಹರು ದಾನವರು
ಸತ್ತ ಸಾತ್ವಿಕದ ಅಂಚಿನಲ್ಲಿ
ಎತ್ತಲು ಕಾಣದಯೇ ಪತಿದೈವ ಬಾರದಯೇ
ಶಪಿಸುತ್ತ ಸಾಯುವಳೇ ಲಂಕೆಯಲ್ಲಿ?
ಮರುಕವನು ತೊಡದೆಯೇ ಸೆರಗಿನಲಿ ಬಚ್ಚಿಟ್ಟು
ಮನದಲ್ಲಿ ರಾಮನ ಸ್ಮರಣೆಯನು ಹೂತಿಟ್ಟು
ಬೆರಗಾದ ಬಾವುಲಿಗೆ ಬುಸುಗುಡುವಳು
ಇಂದು ಬಂದಿಹ ಹನುಮ ಎಂದು ಬರುವನು ರಾಮ?
ಎಂದು ಯುಗ-ಯುಗಕು ಸೀತೆ ಪ್ರಲಾಪಿಸಿಹಳು
ಅನುದಿನವು ಅಸುನೀಗಿ ಭಾವನೆಗೆ ಬಲವಾಗಿ
ಕಟ್ಟೆಯನು ಕಣ್ಣೀರು ಕೊರೆದೊರಟಿತು
ಕಾಮುಕನ ಕಡಿದರು ವನವಾಸ ತೊರೆದರು
ಅಂತ್ಯದಲ್ಲಿ ಆಗಬೇಕೆ ಅಗ್ನಿಗೆ ತುತ್ತು?
ಕಣ್ಮುಚ್ಚುತ್ತ ಕಾದಳು
"ಸುತ್ತಲು ಪತಿವ್ರತದ ಬೇಲಿ ಹಾಕಿ"
-ವೀರಭದ್ರ ಎಸ್ ಹೆಗಡೆ
Anna, Yake intha adult content bariteeya? Namma gurugalu samskrita haalu madidiya anta bejar madkondiddare.
ReplyDelete@Sachin: Samskrita?Oh, Yaava samskrita haalu aagide anta explain maadi... Navu freshers kalita iravru, guidance kotta haage aagutte. :)
ReplyDeletekeep it up bro :) :)
ReplyDeleteThanks anna :)
ReplyDeleteThis was the first poem of yours that I'd read in Vijaya Karnataka :) really appreciable writing!!!!! :) go ahead... :)
ReplyDelete@Pavitra : Sure... Thanks :)
ReplyDeleteಸೂಪರ್ ವೀರಭದ್ರ ಹೆಗ್ಡೇರೆ :-).. ಸೀತೆಯ ಗಾಥೆಯನ್ನು ಇಷ್ಟೊಂದು ಸುಂದರವಾಗಿ ಬರ್ದಿದೀರ.. ಖುಷಿಯಾಯ್ತು ಓದಿ :-)
ReplyDelete@ಪ್ರಶಸ್ತಿ : ಧನ್ಯವಾದಗಳು. ನಿಮ್ಮ ಮೆಚ್ಚುಗೆಯ ಮಾತುಗಳೇ ನಮಗೆ ತ್ರಾಣ.
ReplyDeleteಮೇಲ್ನೋಟಕ್ಕೆ ಇದು ಸೀತೆಯ ಗಾತೆ ಯಾಗಿದ್ದರು , ಒಳನೋಟಕ್ಕೆ ಸಾಕಷ್ಟು ಅರ್ಥ ಇದೆ.
ಇಲ್ಲಿ ಸೀತೆಯನ್ನು ಸಾಕ್ಷಿಯಾಗಿಸಿ , ಇಂದಿನ ಕೆಲ ಮಹಿಳೆಯರ ಅಳಲಿಗೆ ಅಕ್ಷರವಾಗಿಸಿದ ಪ್ರಯತ್ನ. :)