About Me

My photo
Bangalore, Karnataka, India
goodhearty@gmail.com

Tuesday, February 19, 2013

ಮನಸು

 ಎಂದೂ ಸುಮ್ಮನಿರದೆ,
ಆ ದಿಬ್ಬ ಈ ದಿಬ್ಬ , ಆ ಏರಿ ಈ ಏರಿ
ಹತ್ತಿಳಿದು  ಸುತ್ತಿಸಿ, ಪ್ರಶ್ನೆಗೆ ನೂಕುತ್ತಿತ್ತು.
ಇಂದೇಕೋ ಮಾತನಾಡದು  ಮನಸು!


ನೋವ -ಮನದಲಿ  ಇಣುಕಿ ಅಣಕಿಸಿ
ಪರಿ ಪರಿ ಯಾಗಿ ಕಾಡಿ ಕುಣಿದು
ನೆನಪುಗಳ ಸರಪಳಿಗೆ  ಉಸಿರ ಬಿಗಿದು ನಗುತ್ತಿತ್ತು.
ಇನ್ನೇಕೊ   ಸುಮ್ಮನಿರುವುದು   ಮನಸು!


ಕಿರು ದನಿಯಲೇ  ಗುನುಗಿ, ಅರಚಿ
ತಿಳಿದ ರಾಗವನೆ ಬಯಸಿ , ಬೆಸೆದು
ಮರುಗಿ ಧ್ಯಾನದಲೇ ಬಳಲುತ್ತಿತ್ತು.
ಈಗ್ಯಾಕೋ ಮನಸು ಮಾಡದು  ಮನಸು!


ಕವನಗಳ ಗೀಚಿ , ಹರಿದು
ಕನಸುಗಳ ಕಟ್ಟಿ, ಕೆಡವಿ
ಬಿಡದೆ ಕತ್ತಲಿನಲ್ಲಿ ಕಾಡುತಿತ್ತು .
ಹೀಗೇಕೋ ಮೌನ ವಾಗಿದೆ ಮನಸು!
ಮುಂದೇನು ಮಾಡುವುದು ಮನಸು?

                                      -ವೀರಭದ್ರ ಎಸ್ ಹೆಗಡೆ

4 comments:

  1. ಆ ಮನಸಿಗೇ ಕೇಳು.. ಉತ್ರ ಸಿಗುಗು :-)

    ReplyDelete
    Replies
    1. ಕೆಲದ್ದಕ್ಕೇ ಈ ಕವನ :)

      Delete
    2. ಒ೦ದೊ೦ದ್ಸಲ ಹಾಗೇ ಆಗತ್ತೆ. ಎನೂ ಮಾಡಕ್ಕಾಗಲ್ಲ. ಆದ್ರೂ ನೀನು ಮಾಡೋದೂ ಇಲ್ಲ.

      Delete
    3. @Sachinnanna: arta aaydillyo. Yenta maadakkagittu? :)

      Delete