ಕಾರಣವ ಕೊಡಲೇನು ಮುರಿದ ಕನ್ನಡಿಯೆ ?
ಹೊಳೆದ ಕಡೆಯಲ್ಲೆಲ್ಲ ಬೆಳಕ ಬೀರುವುದು.
ಕಾಣದೆ ಇರಲೇನು ಕವಿದ ಕತ್ತಲೆಯೇ?
ಒಳಗೆ ಅಡಗಿಸಿದಲ್ಲಿ ಬೆಳಕ ಮೀರಿಹುದು!
ಕಾರಣವ ಕೊಡಲೇನು ಮುರಿದ ಕನ್ನಡಿಯಲ್ಲ
ಹೊಳೆದ ಕಡೆಯಲ್ಲೆಲ್ಲ ಬೆಳಕ ಬೀರುವುದು.
ಕೇಳದೆ ಇರಲೇನು ಕಡಿದಾದ ದನಿಯೇನು?
ನವಿರಾದ ನಾದವು ಎಲ್ಲೇ ಮೀಟಿಹುದು.
ಕಿವಿಚಿ ಕಡಿದರು ಚೆನ್ನ,ಹಿಂಡಿ ಬಡಿದರು ಬಣ್ಣ!
ಅಳಚಿ ಹೋಗುವ ಮುನ್ನ ಪುಟಿದು ಮೆರದಿಹುದು.
ನಗುವ ಅಂಚಲಿ ಮಿನುಗಿ, ನುಡಿದ ನೆವದಲೇ ತಿರುಗಿ
ನಭಕೆ ನೆಗೆಯಲು ಚಿಲುಮೆ ,ನೆನೆಗೆ ಮರಳಿಹುದು .
ಸುಡು ಬಯಲು ಬಿರುಗಾಳಿ ಸರಿ ದಾರಿ ಸರಿ ಸರಿದು
ಸೆಳೆವ ನದಿಯನು ದಾಟಿ ಸುಧೆಯ ಹರಿಸುವುದು
ಸುಗಿದ ನೆರಳಲೇ ಬಾಗಿ,ಬರುವ ಮಿಡವನೇ ನೂಕಿ
ಬಿಡದೆ ಕಾಡುವ ರಾಗ ಮೂಡಿ ಬಂದಿಹುದು!
--ವೀರಭದ್ರ ಎಸ್ ಹೆಗಡೆ