About Me

My photo
Bangalore, Karnataka, India
goodhearty@gmail.com

Saturday, July 7, 2012

ಹೀಗೊಂದು ಕಥಾ ಚಿಂತನೆ ...

              ಹೂವಿನಿಂದ    ಅಲಂಕ್ರತಗೊಂಡ ಬೋರ್ಡ್ ನೋಡಿ ಖುಷಿಯಾಯಿತು.
ಭುವನ್ ವೆಡ್ಸ್ ಹಂಸ ಎಂದು ಕಣ್ಣಿಗೆ ಅಚ್ಚಾಗುವಂತೆ ಅರಳಿತ್ತು.ಭುವನ್  ನನ್ನ ಆತ್ಮೀಯ ಗೆಳೆಯನಲ್ಲಿ
ಒಬ್ಬನಾಗಿದ್ದ. ಏನೇ ಇರಲಿ,ಕಷ್ಟ ಸುಖ ಎಲ್ಲವನ್ನು ನನ್ನಲಿಯೇ ಮೊದಲು ಹೇಳಿಕೊಳ್ಳುತಿದ್ದ .ವಾರಕ್ಕೊಮ್ಮೆ ಅವರ ಮನೆಗೆ ಹೂಗಿ ,ಅವರ ಮನೆಯವರನ್ನೆಲ್ಲ ಮಾತನಾಡಿಸಿಕೊಂಡು ಬರುವ

ಪ್ರತೀತಿ ತಪ್ಪಲಾಗುತ್ತಿರಲಿಲ್ಲ. ಆತನ ತಂದೆ ತಾಯಿ ಗೆ, ವೀರ ಎಂದರೆ ಎಲಿಲ್ಲದ ವಿಶ್ವಾಸ. ಮೊನ್ನೆ ಏಕಯೇಕೀ ಸರ್ಪ್ರೈಸ್ ಅನ್ನುವಂತೆ ಮದುವೆ ಆಮಂತ್ರಣ ನೀಡಿದ್ದ.
ಮನೆಯವರನ್ನ ಕರಿತರಾ ಅಂತ ಕೇಳ್ದೆ? ಮರು ಮಾತಿಲ್ಲದೆ ನಕ್ಕಿ ಬಾರೋ ರಾಜ ಎಂದು ಹೇಳಿ ಹೂಗಿದ್ದ.



ಮಂಗಳ ವಾದ್ಯ, ಜನರ ಗದ್ದಲ ,ಕೆಲವರ ಸಂಭ್ರಮ ಎದ್ದು ಕಾಣುತಿತ್ತು. ಮಂಟಪದಲ್ಲಿ ಎಲ್ಲ ರೀತಿಯ
ಶಾಸ್ತ್ರಗಳು ನಡಿಯುತ್ತಿತ್ತು, ನಾನು ಅಲ್ಲಿ ಇಲ್ಲಿ ಜೋರಾಗಿ ಕಣ್ಣು ಹಾಯಿಸಿ ಗೂಗಲ್ ಸ್ಕಾನ್ ಮಾಡುವಂತೆ ಮೂಲೆ ಮೂಲೆಗೂ ನೋಡಿದೆ. ಕಲರ್ ಸ್ವಲ್ಪ ಕಮ್ಮಿ ಇತ್ತು. ಸುಂದರ ಹುಡಿಗೀಯರು
ಕಾಣಲಿಲ್ಲ.! ಛೇ ಅಂದು ಸುಮ್ಮನಾದೆ. ಮಧು ಮಗಳು ಸಿಕ್ಕಾಪಟ್ಟೆ ಮೇಕಪ್ಪು ಮಾಡಿದ್ದ ಕಾರಣ ಸಹಜ ಸೌಂದರ್ಯ ತಿಳಿಯಲಿಲ್ಲ. ನನಗಂತು ಚೆಲುವೆಯರು ಸಹಜವಾಗಿದ್ದಾರೆ ಇನ್ನೂ ಅಂದವಾಗಿ
ಕಾಣುತ್ತಾರೆ! ಮೇಕಪ್ಪು ಮಾಡುವುದು ಸೌಂದರ್ಯವನು   ಹೆಕ್ಚಿಸಿಕೊಳ್ಳಲೋ ಅಥವಾ ಚೆನ್ನಾಗಿಲ್ಲ
ಎಂದು ಒಪ್ಪಿಕೊಳ್ಳಲೋ ಶಿವನೇ ಬಲ್ಲ J

      

ಹಂಸಳ ಬಗ್ಗೆ ನನಗೇನೂ ತಿಳಿದಿರಲಿಲ್ಲ. ಧಿಡೀರು ಮದುವೆ.
 ನನಗೆ  ಮದುವೆ ,ಮುಂಜಿ ಗೆ ಹೋಗಲು ಚೂರು ಇಷ್ಟ ಇಲ್ಲ ಆದರೆ ಭುವನ್ ಮದುವೆಗೆ ಹೋಗದಿದ್ದರೆ ಹೇಗೆ? ತಟ್ಟನೆ ಮುಂದಿನ ಸಾಲಿನಲ್ಲಿ ಕುಳಿತ ಚೆಲುವೆಯ ಮೇಲೆ ಕಣ್ಣು ಬಿತ್ತು,
ವಾ ಎಂದೆ(ಮನಸಲ್ಲಿಯೇ) ಆದರೆ ಆಕೆ ಮೊಬೈಲ್ ನಲ್ಲೇ ಇಡೀ ಪ್ರಪಂಚವನ್ನು ಮರೆತಿದ್ದಳು! ಮದುವೆ ಮನೆ ಗದ್ದಲದಲ್ಲೂ ಅರ್ಧ ತಾಸಿಗಿಂತ ಹೆಚ್ಚಾಗಿ ಸಂಭಾಷಣೆಯಲ್ಲಿ ನಿರತವಾಗಿದ್ದು ಊಹಿಸುವ  ಸಂಗತಿ! "She might be committed!" ಎಂದು ಮನಸಲ್ಲಿಯೇ ಮಂದಹಾಸ ಬೀರಿದೆ.

        ನನ್ನ ಬಲ ಬಾಗದ ಕೊನೆಯ ಸಾಲಿನಲ್ಲಿ ವ್ರದ್ಧ  ದಂಪತಿಗಳು ಕುಳಿತಿದ್ದರು.
ಅರೆ ಅವರು ಭುವನ್ ನ   ಅಜ್ಜ ಅಜ್ಜಿ ಅಲ್ಲವೇ ?

                                 ಅಷ್ಟರಲ್ಲಿ ಗಟ್ಟಿಮೇಳ .
ಅಕ್ಷತೆ ಹಾಕಿ ಎಲ್ಲರೂ ವಧು ವರರನ್ನು ಹರಿಸಿದರು ಆದರೆ ಅಜ್ಜ ಅಜ್ಜಿ ಮಾತ್ರ ಕುಳಿತಲ್ಲಿಯೇ ಕುಳಿತಿದ್ದರು. ಏನನ್ನೋ  ಯೋಚಿಸಿರುವಂತೆ ಕಾಣುತಿತ್ತು. ಏನಾಯಿತು ಎಂದು ಕೇಳುವಷ್ಟರಲ್ಲಿ ಅವರು ಅಳುತ್ತಾ ಎದ್ದು ಹೋದರು! ನಾನು ಸಹಜ ಭಾವುಕತೆ ಎಂದು ಸುಮ್ಮನಾದೆ.

 ಮದುವೆ ಮನೆಗೆ ಒಬ್ಬನೇ ಬರುವುದು ಮತ್ತು ಒಬ್ಬನೇ ಪ್ರಾಂಗಣದಲ್ಲಿ ಕೂರುವುದು ದೊಡ್ಡ ಶಿಕ್ಷೆಯೇ ಸರಿ.!
 ಅಲ್ಲಿ ಕೂರಲಾಗದೆ ಆಕಾಶ್ (ಭುವನ್ ತಮ್ಮ) ನನ್ನು ಹುಡುಕುತ್ತ ಹೋದೆ.
ಸಭೆಯ  ಹಿಂಬಾಗ  ಯಾವುದೋ ಲೆಕ್ಕಾಚಾರ ಹಾಕುತಿದ್ದ. ಹೋಗಿ ಕೈ ಕುಲುಕಿದೆ.ಬಿಳಿ ಬಣ್ಣದ ಶೇರ್ವಾನಿ ಆತನಿಗೆ ಹೇಳಿ ಮಾಡಿಸಿದ ಹಾಗಿತ್ತು.

 ಯಾಕೆ ಲೇಟ್ ?.
 ಲೇ ನಾನು ಮೊದ್ಲೆ ಬಂದೆ , ನೀನು ಬಿಸೀ ಆಗಿದ್ದೆ , ಅಂತೂ ಲೈನ್ ಕ್ಲಿಯರ್ ಆಯ್ತು ಎಂದು ಕಾಲು ಎಳೆಯಲು ಪ್ರಯತ್ನಿಸಿದೆ ಆದರೆ ,ಆತನ ಮುಖದಲ್ಲಿ ಯಾವ ಗೆಲುವು ಇರಲಿಲ್ಲ!. ಆಮೇಲೆ ಸಿಗುತ್ತೀನಿ ಎಂದು ಹೇಳಿ ಹೊರಗೆ ಹೋದ.
ಇಲ್ಲಿ ಏನೋ ಅಸ್ಪಷ್ಟ . ಭುವನ್ ನ ಮೇಲೆ ನನಗಿರುವ ವಿಶ್ವಾಸ ಮತ್ತು ಇಲ್ಲಿ ಅಸಮಂಜಸ ವಾದ ವರ್ತನೆ ಎರಡು ತಾಳೆ ಆಗುತ್ತಿರಲಿಲ್ಲ!

ನಾನು   ಹೊಟ್ಟೆ ಪೂಜೆಗೆ ಮುಂದಾದೆಬಹುಶ ಮದುವೆ ಮನೆಯಲ್ಲಿ ಊಟ ಇರದಿದ್ದರೆ ಬೆರಳೆಣಿಕೆ ಯಷ್ಟೇ ಜನ ಬರುತ್ತಿದರ ಎಂದು ಯೋಚಿಸಿದೆ.!ಆದರು ಯಾಕೋ ಏನೋ , .... ಅವರ ಮನೆಯಲ್ಲಿನ ವಾತಾವರಣ ಕಾಣಲಿಲ್ಲ.

ಅಲ್ಲೇ ಕೆಳಗಿನ ಅಂಗಳ ಕ್ಕೆ ಇಳಿದೊಡನೆ ಭುವನ ತಾಯಿ ಸಿಕ್ಕರೂ. ಏನು ಆಂಟೀ ತುಂಬಾ ಟೆನ್ಶನ್ ಮಾಡ್ಕೊಂಡಿದ್ದೀರ? ನನಗೆ ಸೆಪರೇಟ್  ಆಗಿ ಪಾರ್ಟೀ ಕೊಡ್ಸಿ ಎಂದೆ. (ನಮ್ಮ ಬುದ್ಧಿ ಎಲ್ಲಿ ಬಿಡುತ್ತೀವಿ ಹೇಳಿ? ) ಹೊರ ನೋಟಕ್ಕೆ ಕಂಡಿದ್ದ ನಗು ಒಮ್ಮೆಲೇ  ನಿತ್ತಿತು. ತಾಯಿಯ ಕಣ್ಣು ಉಕ್ಕಿ ಬಂತು. ಊಟ ಮಾಡ್ಕೊಂಡು ಹೋಗು ಆಮೇಲೆ ಮಾತಡಣ ಎಂದರು.

ಏನಾಯ್ತಾಪ್ಪ ಆಂಟಿ ಗೆ?
ಮದುವೆ ಟೆನ್ಶನ್ ಇಷ್ಟೊಂದು ಇರುತ್ತ ಎಂದು ಸುಮ್ಮನಾದೆ. ಉಳಿದ ಸ್ನೇಹಿತರು ಬರಲಿಲ್ಲ ಎಂದು ಸ್ವಲ್ಪ ಬೇಸರ ಆಯ್ತು.
ಫೋನು ಮಾಡಿದಮೇಲೆ ತಿಳಿಯಿತು , ಅವರಿಗ್ಯಾರಿಗೂ ಏನು ತಿಳಿದಿರಲಿಲ್ಲ ಎಂದು!


ಊಟ  ರುಚಿಯಾಗಿದ್ದರು ತಿನ್ನಲು ಮನಸ್ಸು ಬರಲಿಲ್ಲ. ಭುವನ್  ತಂದೆ ಅಲ್ಲಿಯೇ ಓಡಾಡುತ್ತಿದ್ದರು
ಏನಂಕಲ್  ಮದುವೆ ತುಂಬಾ ಅರ್ಜೆಂಟ್ ನಲ್ಲಿ ಮಾಡಿ  ಮುಗ್ಸ್ದ್ರಿ ಎಂದು ಕೇಳಿದ್ದಕ್ಕೆ , ನನ್ನ ಕಣ್ಣನ್ನೇ ದಿಟ್ಟಿಸಿ ನೋಡಿ ನಿನಗೆ ಭುವನ್ ಹೇಳಲಿಲ್ವಾ ಎಂದು ಕೇಳಿದರು .

ನಾನು ಏನು ಎಂದು ಕೇಳುತ್ತಲೇ ಅವರ ತಂದೆ ನನ್ನ ಮಾತು  ಮರೆಸಿ ,
ಅಪ್ಪ ಅಮ್ಮ ನ ಯಾಕೆ ಕರೆದುಕೊಂಡು ಬರಲಿಲ್ಲ ಎಂದು ಆತ್ಮೀಯತೆಯಿಂದಲೇ ತರಾಟೆಗೆ ತೆಗೆದುಕೊಂಡರು.ಊರಿಗೆ ಹೋಗಿದ್ದಾರೆ ಎಂದೇ.
ಸರಿ ಆಮೇಲೆ ಮನೆಗೆ ಬಾ ತುಂಬಾ ಮಾತಾಡೋದಿದೆ  ಎಂದು ಬೆನ್ನು ತಟ್ಟಿದರು.

 ಎಲ್ಲವೂ ಅಯೋಮಯ!ಮದುವೆ ಮನೆ ಇಂದ ಹೊರಟ ನನಗೆ ಸಾಲು  ಸಾಲು ಪ್ರಶ್ನೆ  ಕಾಡತೊಡಗಿತು . ವಧು ವರ ರ  ಜೊತೆಗೆ ಫೋಟೋ ತೆಗೆಸಿದಷ್ಟೇ, ಹೆಚ್ಚಿಗೆ  ಏನು ಮಾತನಾಡಲು ಆಗಲಿಲ್ಲ.ನನ್ನ ಸ್ನೇಹಿತನ  ಯಾವುದೇ ನಿರ್ಧಾರವೂ ಪಾಲಕರ ವಿರುದ್ಧವಾಗಿರುವುದಿಲ್ಲ ಎಂದು ಸುಮ್ಮನಾದೆ.ಅಷ್ಟು ನಂಬಿಕೆ ನನಗೆ ಅವನ ಮೇಲೆ.

ಎರಡು ವಾರದ  ನಂತರ ಹೀಗೆ ಭುವನ್ ನ ಮನೆಗೆ ಹೋದೆ.ಆತನ ತಂದೆ,ತಾಯಿ,ಆಕಾಶ್ ಮತ್ತೆ ಅಜ್ಜ-ಅಜ್ಜಿ ಎಲ್ಲರೂ ಇದ್ದರು ನವ ದಂಪತಿಗಳನ್ನು ಹೊರತು ಪಡಿಸಿ. ಸಂಪೂರ್ಣ ಮೌನ. ಯಾರದ್ದು ಮಾತಿಲ್ಲ.ಆತನ ತಾಯಿ ಕುಡಿಯಲು ಚಹಾ ನೀಡಿ ಉಭಯ ಕುಶಲೋಪರಿ ವಿಚಾರಿಸಿ ಸುಮ್ಮನಾದರು.ನಾನು ಆಕಾಶ್ ನ ಕಣ್ಣನು ದಿಟ್ಟಿಸಿದೆ.ಆತ ನನ್ನನು ಆತನ ರೂಮಿಗೆ ಕರೆದು ಕೊಂಡು ಹೋದ...

ಅತ್ತಿಗೆ ಬೇರೆ ಜಾತಿಯವಳು ,ಮೂಲತಹ ಉತ್ತರ ಭಾರತ. ಮನೆಯಲ್ಲಿ ಯಾರಿಗೂ ಮನಸಿರಲಿಲ್ಲ ಎಂದು ಮಾತು ಮುಂದುವರಿಸಿದ.ಸಹಜವಾದ ಬೇಸರ ಧ್ವನಿಯಲ್ಲಿ ಅಡಗಿತ್ತು. ನಾನು ಹೌದಾ ಎಂದು ಕೇಳಿ ಸುಮ್ಮನಾದೆ.ಭುವನ್ ನನಗೆ ಒಂದು ಮಾತು ಹೇಳಲಿಲ್ಲ ಎಂದು ಸ್ವಲ್ಪ ಬೇಸರವಾಯ್ತು. ಆದರು ನಾನು ಸ್ನೇಹಿತರಿಂದು ಏನನ್ನು ಅಪೇಕ್ಷಿಸುವುದಾಗಲಿ, ಅಥವಾ ಎಲ್ಲವನ್ನೂ ನನ್ನೊಂದಿಗೆ ಹೇಳಿಕೊಳ್ಳಲಿ ಎಂದು ಯೋಚಿಸಿದವನಲ್ಲ. ಹಾಗೆ ಯೋಚಿಸುವ ಪ್ರಮೇಯವು ಇರುತ್ತಿರಲಿಲ್ಲ ಏಕೆಂದರೆ, ಎಲ್ಲ ಆತ್ಮೀಯ ಗೆಳೆಯರಿಗೂ ಏನೆ ಇದ್ದರು ಮೊದಲು ನಾನೇ ನೆನಪಾಗುತ್ತಿದೆ.!
ಅಷ್ಟರಲ್ಲಿ ಆತನ ತಂದೆ ರೂಮಿನೊಳಗೆ ಬಂದರು.

ನೀನಾದ್ರು ಒಂದು ಮಾತು ಹೇಳ  ಬಹುದಿತ್ತು ಎಂದು ಮೇಲು ಧ್ವನಿಯಲ್ಲ್ಲಿ ಕೇಳಿದರು..
(ನಾನು  ಮಾತನಾಡಲಿಲ್ಲ,ಅವರ ಮಾತು ಮೌನ ಮತ್ತು ವೇದನೆ ಅಲ್ಪ ವಿರಾಮ ಪಡೆದು ಭೇಧಿಸುತಿತ್ತು !)
ಅವರ ಯಾವ ಮಾತಿಗೂ ನನ್ನಲಿ ಮರು ಮಾತಿರಲಿಲ್ಲ!ಒಳಗೆ ಹೋದ ಕಣ್ಣು,ಕಳೆದುಕೊಂಡಂತೆ ಭಾಸ,ಬಿಡದೆ ಕಾಡುವ ದುಃಖ . ಹೆಚ್ಹಾಗಿ ಸಮಾಜದ ಭಯ! ಹೊರಗೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದನ್ನೇ ಬಿಟ್ಟಿದ್ದರು.ಕಟುವಾದ ಪ್ರಶ್ನೆ.ವಿವಿಧ ರೀತಿಯ ನೋಟ,ಇರದ ಸ್ಥಾನ ಮಾನ ಎಲ್ಲವೂ ಅವರೆಲ್ಲರ ತಲೆ ಕೆಡಿಸಿತ್ತು.

ನಾನು ಮಾತಿಗೆ,
ಇರಲಿ ಅಂಕಲ್ ಎಲ್ಲ ನಿಧಾನಕ್ಕೆ ಸರಿ ಹೋಗುತ್ತೆ ಅಲ್ಲವ ಎಂದು ಕೇಳಿದೆ..

ಅದಕ್ಕೆ ಅವರ ತಂದೆ,
ಬಹುಶ ಎಲ್ಲರೂ ಹೀಗೆ ಅಂದು ಕೊಳ್ಳುತ್ತಾರೆ,ಯಾವುದೋ ನಿರ್ಧಾರ ಮಾಡಿ ಆಮೇಲೆ ಎಲ್ಲರನ್ನು ಒಪ್ಪಿಸುತ್ತಿವಿ ಎಂದು ನಂಬುತ್ತಾರೆ. ತಾಯಿ-ತಂದೆ ಒಲ್ಲದ ಮನಸ್ಸಿಂದ ಒಪ್ಪಿಕೊಂಡರು, ಅವರ  ಒಳಗಿನ ನೋವು ಆ ಕ್ಷಣಕ್ಕೆ ಮಕ್ಕಳಿಗೆ ತಿಳಿಯುವುದಿಲ್ಲ . ಅವರು ನಮ್ಮ ಜಾಗಕ್ಕೆ ಬಂದಾಗ  ಅಷ್ಟೇ ತಿಳಿಯುತ್ತೆ ಎಂದುಬಿಟ್ಟರು....

ನಾನು ಭಾವುಕನಾದೆ.ಅವನ ಮನಸ್ಸು ಬದಲಿಸುವ ಪ್ರಯತ್ನ ಮಾಡಬಹುದಿತ್ತ ಎಂದು ಕೇಳಿದೆ..

ಅವರ ತಂದೆ ಜೋರಾಗಿ ಅಳುತ್ತ ಅವನ ಜೀವನ ಅವನೇ ನೋಡ್ಕೋತಾನೆ ಅಂದ್ಬಿಟ್ಟ.ನಾವು ನಮ್ಮ ಜೀವನ ನೆ ಅವನ ಜೀವನ ಅಂತ ಇಪ್ಪತ್ತೇಳು ವರ್ಷ ಅಂದುಕೊಂಡ್ವಿ.ಆದರೆ ಅವನಿಗೆ ಅವರ ಅಮ್ಮನ ಸಂಕಟ ನು ಅರ್ತ ಆಗಲಿಲ್ಲ ಪ್ರೀತಿ ನು ಕಾಣಲಿಲ್ಲ, ಎಂದು ಬಿಟ್ಟರು.ನಾನು ತುಂಬಿದ ಕಣ್ಣುಗಳಿಂದ ರೂಮಿನ ಹೊರಗೆ ನಡೆದೇ...


ಮನೆಗೆ ಹೋಗುತ್ತ, ಅವರ ತಂದೆ ಹೇಳಿದ ಮಾತು ಒಂದೊಂದನ್ನು ತರ್ಕ ಮಾಡಲು ಶುರು ಮಾಡಿದೆ.ಭುವನ್ ಅವರಲ್ಲೇ ಒಬ್ಬಳನ್ನು ಆರಿಸಿಕೊಂಡಿದ್ರೆ ಅವರು ತಲೆ ಕೆಡಿಸಿ ಕೊಳ್ಳುತಿರಲಿಲ್ವ?ಅಷ್ಟಕ್ಕೂ ಸಮಾಜ ವನ್ನೂ ಯಾಕೆ ಆಗು ಹೋಗು ಗಳಿಗೆ ಕನ್ನಡಿ ಯಾಗಿಸಿಬೇಕು?ಸಮಾಜದಲ್ಲೇ ಬದುಕಬೇಕು ಸರಿ ಆದರೆ ಸಮಾಜ ಬಾಂಧವ್ಯಕ್ಕಿಂತ ದೊಡ್ದದ? ಸಂಕುಚಿತ ಮನೋಭಾವ ಎನ್ನುವುದಕಿಂತ ,ಇನ್ನು ವಿಶಾಲ ಯೋಚನೆ ಮಾಡಿದ್ದರೆ ಎಲ್ಲವೂ ಸರಿಯಾಗುತಿತ್ತ?ಹೀಗೆ ಹತ್ತು ಹಲವಾರು ಪ್ರಶ್ನೆ ಗಳು ಮತ್ತು ವಿಚಿತ್ರವಾದ ಭಂಗಿಯಲ್ಲಿ ಬಿಡದೆ ಯಾವುದೇ ಯೋಚನೆಯಲ್ಲಿರುವ ಭುವನ್ ನ ಅಜ್ಜನ ಕಣ್ಣು ವಿಪರೀತ ಕಾಡ ತೊಡಗಿತು.

ನಾನು ಮನೆಗೆ ಬಂದೆ....

ಎಲ್ಲವನ್ನೂ ಮನೆಯಲ್ಲಿ ಮುಚ್ಹು ಮರೆ ಇಲ್ಲದೆ ಹೇಳುವ ಪ್ರವೃತ್ತಿ ಇದ್ದ  ಕಾರಣ ಮನೆಗೆ ಬಂದೊಡನೆ ನಡೆದ ಮಾತು ಕಥೆಯನ್ನೂ ತಂದೆ ತಾಯಿಯಲ್ಲಿ ಹೇಳಿದೆ.ಮೊದಲನೇ ಬಾರಿಗೆ ಅವರಿಂದ ಯಾವ ಮಾತು ಬರಲಿಲ್ಲ.ಇಬ್ಬರು ಸುಮ್ಮನಿದ್ದರು. ನನ್ನನ್ನು ಕಾಡಿದ ಪ್ರಶ್ನೆಗಳನ್ನೆಲ್ಲ ಕೇಳಿದೆ,ಆದರು ಸುಮ್ಮನಿದ್ದರು!ಅಷ್ಟರಲ್ಲಿ ಭವನ್ ನ ಮನೆಯಿಂದ ಫೋನು ಬಂತು.ಆಕಾಶ್ ನ ಧ್ವನಿ ಯಾಗಿತ್ತು.ತೀರ ಅಳುತ್ತ ಹೇಳಿದ,

ತಾತ ಇನ್ನಿಲ್ಲ, ಹ್ರುದಯಾಘಾತ   ಅಂದ ಅಷ್ಟೇ!....

ನನಗೆ ನೆಲವೇ ಕುಸಿದಂತಾಯಿತು.ಆತಂಕ ಬೇಸರ ಕಂಗಾಲು.ಅಮ್ಮನಿಗೆ ಫೋನು ನೀಡಿ ಅಲ್ಲಿಯೇ ಕುಳಿತು ಬಿಟ್ಟೆ.ಉಸಿರು ಕಟ್ಟಿದ ಅನುಭವ.ಆಗ ವಿಷಯ ತಿಳಿದ ನನ್ನ ಅಮ್ಮ,

ಭುವನ್ ಸ್ವಲ್ಪ ಅರ್ಥ ಮಾಡಿಕೊಂಡಿದ್ದಾರೆ ಅವರ ಅಜ್ಜ ಇಷ್ಟು ಬೇಗ ಹೋಗುತ್ತಿರಲಿಲ್ಲ ಅಲ್ವ? ಎಂದು ಕೇಳಿದರು.

ಈ ಪ್ರಶ್ನೆಯೇ ಸಾಕಾಗಿತ್ತು,ಅದರ ಒಳ ಮರ್ಮ ಕೂಡಲೇ ಅರಿತೆ.ನನ್ನ ಎಲ್ಲ ಪ್ರಶ್ನೆ ತರ್ಕಕ್ಕೆ ಉತ್ತರವಾಗಿತ್ತು.!ಮನೆಯಲ್ಲಿ ಸ್ಮಶಾನ ಮೌನ.
ಕಣ್ಣಿನಿಂದ ಬಂದ ಹನಿಯನ್ನು ಒರಸುತ್ತ ಹಾಗೆ ನಿಧಾನವಾಗಿ ಮೇಲಕ್ಕೆದ್ದು ಭುವನ್ ನ ಮನೆಯ ಹಾದಿ ಹಿಡಿದೇ.....