About Me

My photo
Bangalore, Karnataka, India
goodhearty@gmail.com

Sunday, August 26, 2012

ಇಂತಿ ನಿನ್ನ ಪ್ರೀತಿಯ ...


ಸೂಚನೆ!!!!

ಈ  ಕಥೆ ಯಲ್ಲಿ ಬರುವ ಎಲ್ಲ ಪಾತ್ರಗಳು ಕಾಲ ನಿರಣಿತ   ಹಾಗೂ ಕಾಲ ನಿರ್ಮಿತ.
ಇದು ಒಂದು  ಹೃದಯದ  ಮಾತಲ್ಲ, ಎರಡು ಹೃದಯದ  ಪರದಾಟ.
ಮೊದಲು ಇವರಿಬ್ಬರ ಸ್ತಿತಿ ಗತಿ  ಪರಿಚಯ.
ಅವನು ಖ್ಯಾತ ಬಹುರಾತ್ರಿಯ ಕಂಪನಿ ಉದ್ಯೋಗಿ , ಅವಳ ಬಗ್ಗೆ ನಮಗೆ ಅಷ್ಟು  ಮಾಹಿತಿ ಇಲ್ಲ.ಇಬ್ಬ್ರ ನಡುವೆ ಮೇಲ್ನೋಟಕ್ಕೆ  ಏನು  ಇಲ್ಲ ಅಂತ ತಿಳಿಯುವುಧು, ಆದರೆ  ಆ ಅಂತರಾಳ  ಹಾಗೂ ಅದರ  ಭಾವನೆ ಯಾರಿಗೂ ತಿಳಿಯಲಾಗದು.

ಒಂದು  ಪುಟ್ಟ ವ್ಯತ್ಯಾಸ  ಭಾವನೆ ಹಾಗೂ ಸ್ನೇಹಿತರ ನಡುವೆ.

ಎಲ್ಲರೂ ಸ್ನೇಹಿತರನ್ನು ಬದಲಾಯಿಸಬಹುದು .ಆದರೆ  ಭಾವನೆ ಅಂಡ್ ಭಾವನೆಯ ಭಾವವನ್ನು  ಬದಲಿಸಲು  ಎಂದು  ಸಾಧ್ಯವಿಲ್ಲ.
 ಈತನ ಭಾವನೆಯ ಬಗ್ಗೆ ನಮಗೆ ಖಾತ್ರಿ ಆಗಿದ್ದು ಎರಡು ತಿಂಗಳ ಹಿಂದಷ್ಟೇ.

ಇವನ ಪರದಾಟದ  ಒಂದು ಚಿಕ್ಕ ಮತ್ತು ಚೊಕ್ಕ ಉದಾಹರಣೆ ಇಲ್ಲಿದೆ.

ಯಾವತ್ತೂ message  ಮಾಡದ ಹುಡುಗ ನಿನ್ನೆ  ಪ್ಲೀಸ್ ಹೆಲ್ಪ್ ಅಂತ ಕಳಿಸಿದ. ಕಾಲ್ ಮಾಡಿ ಕೇಳಿದಾಗ, ಹೊಸ mobile  ತೆಗೆದುಕೊಂಡ  ಸಂತಸ ಹಾಗೂ ಅದರಲ್ಲಿ ಇರುವ 121 (ಸಮುದ್ರದ ಆಳದ) ಕಳಿಸಿದ  ಸಂದೇಶಗಳು.!! ಇವನ್ನು ಆ ಎಲ್ಲ SMS (ಸಿಹಿ ಮನಸಿನ್ನ ಸಂದೇಶಗಳನ್ನು  ಹಾಗೂ ಕೆಲವು ಫಾರ್ವರ್ಡ್  ಟೆಕ್ಸ್ಟ್ ) ಹೊಸ ಮೊಬೈಲ್ ಗೆ  ಕಳುಹಿಸುವ ಆತುರ ಹಾಗೂ ಕಾತರ.!!
 ಆ ಸಂದೇಶಗಳು 4-5 ವರುಷದ ಹಳೆಯದಾದ  ಸಂದೇಶಗಳು. ನಂತರ ಅವನಿಗೆ ಮೆಸೇಜ್ ಸೆಂಟರ್ ನಂಬರ್ ಹಾಗೂ ಸೆಟ್ಟಿಂಗ್ಸ್ ಗಳನ್ನು ಕಸ್ಟಮರ್ ಕೇರ್ ಗೆ ಕರೆ ಮಾಡಿ ಪಡೆದುಕೋ ಎಂದಾಕ್ಷಣ ಅವನಿಗೆ ಸಂತಸದ ಹೊನಲು.
 ಇದು  ಪ್ರೀತಿ ಯೋ ಪ್ರೇಮವೋ  ಇನ್ನೂ ತಿಳಿಯುತಿಲ್ಲ..

ಪ್ರೀತಿ ಪ್ರೇಮದ ಒಂದು  ಸಣ್ಣ ವೈತ್ಯಾಸ ನಿಮಗೆ, ನನ್ನ ಅಬ್ಸರ್ವೇಶನ್ ಮಾಡಿದ್ ಹಾಗೆ ಡಿಫೈನ್ ಮಾಡ್ತೀನಿ.ಪ್ರೀತಿ- ಇದು  ವನ್ ವೇ, ಎಸ್ಟ್ ಕೊಟ್ಟರು ಕಾಲಿ  ಅಗಾದು! ಒಂದು  ರೀತಿಯಲ್ಲಿ ಭಟದ ಭಾವಿ. 
ಪ್ರೇಮ – ಇದು  ಟೂ ವೇ ಎಂದು  ಹೇಳಲು ಆಗುವುದಿಲ್ಲ ಆದರೆ ವನ್ ವೇ ಅಂತ ಕಂಕ್ಲೂಡ್ ಮಾಡಕ್ಕೂ ಆಗಲ್ಲ.ಇದು  ಒಂದು ತ್ರಿಶಂಕು ಸಂದರ್ಭ ಅತವ ಇಂಟರ್ಮೀಡಿಯೇಟ್ ಸ್ಟೇಟ್ ಅಂತ ಹೇಳಬಹುದು  ಅಷ್ಟೇ!!!


ಬಾಲ್ಯದಲ್ಲಿಯೇ ಇವನು  ಶಾಲೆ ಮುಗಿದ ನಂತರ ಅವಳ ಮನಗೆ ಹೋಗಿ , ಅಮ್ಮ ಕೆಲಸ ಮುಗಿಸಿ ಬರುವ ವರೆಗೆ ಅವಳ ಜೊತೆ ಆಟ ಆಡಿಕೊಂಡು ಇರುತ್ತಿದ. ಕೆಲವೊಮ್ಮೆ ಚಿಕ್ಕ ಕಾರಣಕ್ಕೆ ಅತ್ತ  ಉದಾಹರಣೆಯು  ಇದೆ. ಅದು ಯಾವ ಜನ್ಮದ  ಸ್ನೇಹ ಭಾವನೆ ಇವನಿಗೆ ಪ್ರೀತಿಯ  ದಿಕ್ಕು ತೋರಿಸಿತೋ ಇನ್ನು  ನನ್ನ ಹತ್ರ ಹೇಳಿಲ್ಲ. 
ಆದರೆ  ಇವನು ತನ್ನ ಪ್ರೇತಿಯನ್ನು ಬುದ್ಧಿಯ  ಕೈಗೆ ಕೊಡದೆ  ತುಂಬಾ ಜೋಪಾನ ಮಾಡಿಕೊಂಡಿದ್ದ. ಆದರೆ  ಬುದ್ಧಿ  ಮತ್ತು ಹೃದಯದ ನಡುವೆ ಮನಸಿನ್ನ ಗೋಡೆ  ನಿರ್ಮಿಸಿ ಬುಧಿವಂತನ ಹಾಗೆ ನಟನೆ ಮಾಡಿ ನಮ್ಮ ಹತ್ತಿರ ಸಿಕ್ಕಿಹಾಕಿ ಕೊಂಡಿರುತ್ತಾನೆ .

 ಇಬ್ಬರು ಹೇಗೆ ಎಂದರೆ ಇವನು ಜಾಣ ದಡ್ಡ  ಅವಳು ದಡ್ಡ  ಜಾಣಿ. ಇವನ ಹಿಂಸೆ ನೋಡಲಾಗದೆ  ಅವನ ಹಳೆ ಮೊಬೈಲ್ ಕಿತ್ತು ಕೊಂಡ್ ನೋಡಿದೆ.  ಆಗ inbox  ಫುಲ್ಲ್ ಅವಳ SMS ಗಳೇ.. ಅದು  4-5 ವರ್ಷ ಹಳೆಯ ಟೆಕ್ಸ್ಟ್ ಗಳು. ತಲೆ ಕೆಟ್ಟು, ಲೇಯ್ ಅವಳಿಗೆ, ನಿನ್ನ ಲೈಕ್ ಮಾಡ್ತಾಳೋ ಇಲ್ವೋ ಅಂತ ಕೇಳಿ, ಮೆಸೇಜ್ ಕಳಿಸಲ  ಅಂತ ಕೇಳಿದೆ?

ಈ ಧೈರ್ಯ ವಂತ  ಪುಕ್ಲು  ಹೂಉ ಅಂತ ಹೇಳಿದ.. ಆಗ ನಾನು ಈತನ ಪರವಾಗಿ.....
‘Hi’
  ಅಂತ  ಕಳಿಸಿದ ಸಂದೇಶಕ್ಕೆ ‘hello’ ಎಂಬ ರಿಪ್ಲೈ ಬಂತು.!!(ಎಂದು ಬರದ ರಿಪ್ಲೈ ಅಂತೆ)

 rappo  build  ಮಾಡೋಕ್ಕೆ ಅಂತ ‘Where r u’? ಎಂದೇ  ‘I am in native ’ ಅಂತ ಬಂತು. ಅವಳು ಮಲೆನಾಡಿನ ಮನೆಯಲ್ಲಿ ನೆಟ್‌ವರ್ಕ್ ಇಲ್ಲದೇ  ಪರದಾಟ ನಡೆಸಿರ ಬೇಕು ಅಂತ ಅಂದುಕೊಂಡೆವು . ಆದರೆ ನಮ್ಮ ಗೆಸ್  ಹುಸಿ ಆಯಿತು.
ಹಾಗೆ ಒಂದಿಷ್ಟು ಲೋಕ ರೂಡಿ ಮಾತು.ಆಮೇಲೆ ನಾನು ಹೀಗೆ ಪ್ಲೇಟ್ ತಿರಿಗಿಸಿದೆ ಸಂದೆಶದಲ್ಲೇ,..
‘Getting married is it?’
ಆಕೆ ಅವಕ್ಕಾಗಿ ‘Wat’ ಎಂದು ರಿಪ್ಲೈ ಮಾಡಿದಳು.ನಾನು ‘just asked’ ಎಂದು ಕಳಿಸಿದೆ .
ಇಲ್ಲಿಗೆ message  ಮುಗಿಯಲಿಲ್ಲ.
ಆಕೆ ತಿರುಗಿ ಕೇಳಿದಳು.
‘Shall I ask you someting?’ Something personal......
ವಾ! ನನ್ನ ಸ್ನೇಹಿತನ ಪರವಾಗಿ ನಾನು ಕಳಿಸಿದ ಸಂದೇಶ ತಲುಪಿತ ಎಂಬ ಕುತೂಹಲ.
ಒಂದು ತಾಸು ಕಾದಮೇಲೆ ನಮ್ಮ ‘ask’  ಎಂಬ ಸಂದೇಶಕ್ಕೆ
‘when is ur birthday ?’  ಎಂಬ ಉತ್ತರ!! (cream biscuit)

ನನ್ನ ಪಿತ್ತ ಸ್ವಲ್ಪ ನೆತ್ತಿಗೇರಿ ಕೇಳಿಯೇಬಿಟ್ಟೆ...
‘Do u like any?’
ಆಕೆ
‘I like many’ ಎಂದಳು.
ನಾನು
‘I like u and love u’  ಎಂದು ಕಳಿಸುವ ಯೋಚನೆ ಇತ್ತು.ಮನಸ್ಸು ಒಪ್ಪಲಿಲ್ಲ.
‘I like nd love ur reply’  ಎಂದು ಕಳಿಸಿದೆ.  ಆಕೆ ಪೆದ್ದು ಜಾಣಿ ಅಲ್ಲವೇ. ಮೆಸೇಜ್ ಅಲ್ಲಿಗೆ ಫಾರ್ವರ್ಡ್ ಗಳ ರೂಪ ಪಡಿಯಿತ್ತಷ್ಟೇ..
 ಕುತೂಹಲ ಕಂಟ್ರೋಲ್ ಮಾಡಲಾಗದೆ ನಾನು ಆತನನ್ನು ಕೇಳಿದೆ, ಅಕಸ್ಮಾತಾಗಿ  ಅವಳ ಜೊತೆ ಮದುವೇ   ಆಗಲಿಲ್ಲ  ಅಂದ್ರೆ ಏನು ಅಂತ?
ಆತ ಹೀಗೆ ಅನ್ನೋದ?
“If it happens I am happy, if it is not then I am not”!!!!!!
 ಕೇಳಲು ರೈಮಿಂಗ್ ಅಂತ ಅನಿಸಿರಬಹುದು, ಹೃದಯದಲ್ಲಿ ಅಡಗಿಸಲಾಗದ  ಪ್ರತಿಕ್ರಿಯೆ ಅವನ ಮೂಕದ ಬದಲಾವಣೆ , ಹೇಳಲಾರದ  ಯಾತನೆಯನ್ನು  ತೋರಿಸುತಿತ್ತು. 
ಇವನ ಪ್ರೀತಿ ಅವಳಿಗೆ ಸಿಗದೆ  ಹೋದರೆ .... ಅದು  ಒಂದು  ಹೃದಯದ  ಭಾವನೆಯ ಬೆಲೆ ಅರಿಯದೆ,  ಇನ್ನೊಂದು  ಮನಸ್ಸಿಗೆ ಆಗುವ ಆಘಾತ.
 ಮನಸಿನ್ನ ಮಾತನ್ನು ಹೇಳಿದರೆ ಸ್ನೇಹಕ್ಕೆ ಬರೆ, ಸ್ನೇಹ ಕಾಪಾಡಿದರೆ  ಪ್ರೀತಿಯ  ಹೊಗೆ!!!!!
--ಹರ್ಷ ಎಂ