About Me
Tuesday, February 19, 2013
Thursday, February 7, 2013
ಬಿಡಿ-ಗವನಗಳು 1
೧. ಎದೆಯನ್ನು ಬಗೆದೆ ಬರಿದಿದ್ದೆ ಪ್ರೇಮ ಕವನ
ಮಾಡಲಾಗದೆ ಕವನದ ಮನನ
ತಿರುಗಿ ಬರೆದಳು
ಅಣ್ಣ ನಿನಗೆ ನನ್ನ ನಮನ :)
೨. ಸುಳಿ ಮಿಂಚಿನಂತೆ ಸೆಳೆದಿತ್ತು ಅವಳ ನಯನದ ನೋಟ
ನಗುವು ಹೊಂಗನಸಾಗಿ ಮಾಡಿತ್ತು ಮನಕೆ ಮಾಟ
ತಿಳಿಯಲು ಹಿಂದೆಯೆ ಸಾಗಿತ್ತು ನನ್ನ ಓಟ
ತಿಳಿದು ತಡವರಿಸದೆ ತಿರುಗಿ ನುಡಿದಳು ,
ನನ್ನ ಕಾಲಿಗಿರುವುದು ಒರಿಜಿನಲ್ ಬಾಟ !
೩. ನನಸಾಗುವ ವೇಳೆಗೆ ,
ಆತ ಕನಸನ್ನು ಕಾಯಿಸಿದ,
ನನಸಾಗದಿದ್ದಾಗ ಕಾದ ...
ಕನಸಿನ ಕಾವಲಿಯಲಿ ಇನ್ನೂ ಕಾದ!!
೪. ಆತ ಎಂದಿಗೂ ಆಕೆಯ,
ನಗುವಿಗೆ ನಲಿದವನಲ್ಲ
ಸಿಡುಕಿಗೆ ಮರುಗುವನಲ್ಲ
ಅಳಲಿಗೆ ಕರಗುವನಲ್ಲ
ಆದರೆ ಇಂದು ಮೌನಕ್ಕೆ ಶರಣಾದ !
೫. ಕನಸು ಮನಸು ಎರಡು ಒಂದೇ ಆಗಿತ್ತು
ನಂತರ ,
ಕನಸು ಕವಿಯಿತು ಮನಸು ಮುರಿಯಿತು
ಆನಂತರ,
ಕನಸು ಮನಸು ಬೇರೆ ಆಯಿತು
ಕನಸು ಅರಳಿತು ,ಮನಸು ಮಿಡಿಯಿತು.
--ವೀರಭದ್ರ ಎಸ್ ಹೆಗಡೆ
Subscribe to:
Posts (Atom)