ಬಿಡಿ-ಗವನಗಳು 1
೧. ಎದೆಯನ್ನು ಬಗೆದೆ ಬರಿದಿದ್ದೆ ಪ್ರೇಮ ಕವನ
ಮಾಡಲಾಗದೆ ಕವನದ ಮನನ
ತಿರುಗಿ ಬರೆದಳು
ಅಣ್ಣ ನಿನಗೆ ನನ್ನ ನಮನ :)
೨. ಸುಳಿ ಮಿಂಚಿನಂತೆ ಸೆಳೆದಿತ್ತು ಅವಳ ನಯನದ ನೋಟ
ನಗುವು ಹೊಂಗನಸಾಗಿ ಮಾಡಿತ್ತು ಮನಕೆ ಮಾಟ
ತಿಳಿಯಲು ಹಿಂದೆಯೆ ಸಾಗಿತ್ತು ನನ್ನ ಓಟ
ತಿಳಿದು ತಡವರಿಸದೆ ತಿರುಗಿ ನುಡಿದಳು ,
ನನ್ನ ಕಾಲಿಗಿರುವುದು ಒರಿಜಿನಲ್ ಬಾಟ !
೩. ನನಸಾಗುವ ವೇಳೆಗೆ ,
ಆತ ಕನಸನ್ನು ಕಾಯಿಸಿದ,
ನನಸಾಗದಿದ್ದಾಗ ಕಾದ ...
ಕನಸಿನ ಕಾವಲಿಯಲಿ ಇನ್ನೂ ಕಾದ!!
೪. ಆತ ಎಂದಿಗೂ ಆಕೆಯ,
ನಗುವಿಗೆ ನಲಿದವನಲ್ಲ
ಸಿಡುಕಿಗೆ ಮರುಗುವನಲ್ಲ
ಅಳಲಿಗೆ ಕರಗುವನಲ್ಲ
ಆದರೆ ಇಂದು ಮೌನಕ್ಕೆ ಶರಣಾದ !
೫. ಕನಸು ಮನಸು ಎರಡು ಒಂದೇ ಆಗಿತ್ತು
ನಂತರ ,
ಕನಸು ಕವಿಯಿತು ಮನಸು ಮುರಿಯಿತು
ಆನಂತರ,
ಕನಸು ಮನಸು ಬೇರೆ ಆಯಿತು
ಕನಸು ಅರಳಿತು ,ಮನಸು ಮಿಡಿಯಿತು.
--ವೀರಭದ್ರ ಎಸ್ ಹೆಗಡೆ
I like the last paragraph he hehe.. :) Over all its good veera.. :) welcome back to bhaavajeevigala loka.. :)
ReplyDeleteHihihi :) :) Dhanyavaadagalu :)
Deleteಚೆಂದ ಇದ್ದು ಹೆಗ್ದೇರೆ.
ReplyDeleteಕವನಕ್ಕೆ .. ಅಣ್ಣ ನಿನಗೆ ನಮನ, ಕಾಲಿಗಿರುವುದು ಒರಿಜಿನಲ್ ಬಾಟ.. ಹೆ ಹೆ. ಸಖತ್ತಾಗಿತ್ತು. ಬ್ಲಾಗಿನ ಹೊಸ ವಿನ್ಯಾಸನೂ ಚೆನಾಗಿದ್ದು :-)
Dhanyavaadagalu :)
Delete