ಗೆ,
ನಾನು ಏನು ಕೊಡಲಿ ಇಂದು ನನ್ನ ನಲ್ಮೆಗೆ ?
ಏನು ಕೊಟ್ರು ಕಡಿಮೆ ಅವಳ ತುಂಬು ಪ್ರೀತಿಗೆ!
ಹಚ್ಚಿ ಬಿಡುವೆ ಕಪ್ಪ, ಕಾಡೋ ಕಣ್ಣ ಹೊಳಪಿಗೆ
ಮೆಚ್ಚಿ ಹೊಗಳಿ ಬಿಡುವೆ, ನಗುವ ಮುದ್ದು ಮನಸಿಗೆ.
ಗೆಜ್ಜೆಯಾಗಿ ಕುಣಿದು ಬಿಡುವೆ ಇಡುವ ಹೆಜ್ಜೆಗೆ
ಬಳೆಯೇ ಆಗಿ ಸುತ್ತುವರಿವೆ ಇರುವ ಕಷ್ಟಕೆ.
ಗಂಧ ತೇಯ್ದು ಹಚ್ಚಿ ಬಿಡುವೆ ಕೆಂಪು ಕೆನ್ನೆಗೆ
ದೃಷ್ಟಿ ತೆಗೆದು ಮುತ್ತು ಕೊಡಲೇ ಮಧ್ಯ ಹುಬ್ಬಿಗೆ ?
ತಲೆಯ ದಿಂಬು ಆಗಿ ನಿನ್ನ ಕಣ್ಣ ಒರೆಸುವೆ,
ಹೊದೆಯೋ ಹಾಸೆಯಾಗಿ ಬರುವ ದುಗುಡ ತಡೆಯುವೆ.
ಏನು ಕೊಡಲಿ ನಿನಗೆ ಎಲ್ಲಾ ನಿನ್ನದೇ ಇದೆ
ಎಲ್ಲಾ ಕಡೆಯೂ ನೀನೆ ಇದ್ರೆ ನನ್ನದೇನಿದೆ ?!
--ಇಂದ
No comments:
Post a Comment