About Me

My photo
Bangalore, Karnataka, India
goodhearty@gmail.com

Monday, November 28, 2011

ಮನದ ಬಣ್ಣ

ಎಂದೋ ಗೀಚಿದ ಹರಿದ ಹಾಳೆಯ ಹಿಡಿದು
ಮತ್ತೊಮ್ಮೆ ಬಣ್ಣವನು ಬಳಿಯುವೆನು ಇಂದು
ಬದಲದ     ಭಾವನೆಯು  ಚಿತ್ತಾರ ಆದಲ್ಲಿ
ಮೂಡುವುದು  ಕಾಡಿರುವ ಕಲ್ಪನೆಯ ಸಿಂಧು


ನೆನಪಿನಂಗಳದಲ್ಲಿ  ಹೀಗೆಯೇ ಕಾಡುತಿರೆ,
ಹಾಗೆಯೇ ಬಿಡಿಸುವೆನು  ನೆನವುಗಳನ್ನು
ಇರುವ  ಬಣ್ಣಗಳನ್ನೆಲ್ಲ  ಒಪ್ಪ್ಪಾಗಿ  ಹಚ್ಚುತಲಿ
ಪಡೆದುಬಿಡು ಜೀವವನು  ನಾಚಿಸುತ ನನ್ನು!


ಇರದ  ನಲ್ಮೆಯ ಮಾತು ,ಮನಸಿನಂಗಳ   ಆಗಿ
ತುಂಬಿಕೊಂಡಿದೆ ನಯನಬೆಳಕನ್ನೆಲ್ಲ  ಬಿರಿದು.
ಮಿಡಿಯದ   ಮೌನವನು, ಮರೆತಿರುವ  ಮಧುರವನು
ತಿರುವಿದೆನು ಬಣ್ಣದಲಿ  ಸೆಲೆಯಲ್ಲಿ ಬೆರೆತು.


ಎಲ್ಲ ಬಣ್ಣಗಳು ಹಾಗೆ  ಗರಿಗೆದರಿ ಬಾನಿನಲಿ  
ಹಾರುತಿದೆ ಹಕ್ಕಿಗಳ ಹಿಂಡು ಹಿಡಿದು!
ಹರಿದ ಹಾಳೆಯ ಮೇಲೆ ಬೆರೆತ ವರ್ಣವು ಈಗ
ಮೆರೆದು ಮಾಡಿತು  ಮೋಡಿ, ಆಗಸದಿ ನೋಡು!

5 comments:

  1. nice one... who is sindhu.. :P ha ha...

    ReplyDelete
  2. This comment has been removed by the author.

    ReplyDelete
  3. ಚೆನ್ನಾಗಿದ್ದು ಕವನ :-)ವೀರಭದ್ರ ಹೆಗ್ಡೇರೆ.. ನಿಮ್ಮ ಬ್ಲಾಗು ಈಗಾಗಲೇ "ಹವ್ಯಕರ ಬ್ಲಾಗುಗಳು" ಅಲ್ಲಿ ಇದ್ದು.. ಅದರ Admin ಗೆ ನಾನು ನಿಮ್ಮ ಬ್ಲಾಗಿಗೆ ಬಂದಿದ್ದ ದಿನನೇ ಗೊತ್ತಾಯ್ದು ಈ ವಿಚಾರ.. :-) :-) ನಿಮ್ಮ ಬ್ಲಾಗನ್ನ ಧನ್ಯವಾದಗಳು ಹೆಗ್ಡೇರೆ :-) FB ಲಿರೋ ಲಿಸ್ಟಲ್ಲೂ ಹಾಕಿ ಆಯ್ದು :-)

    ReplyDelete
  4. @Prashasti: "This post has been removed by the author" andre arta aaydille......???

    Thank you :)

    ReplyDelete